Suvarna Arogya Suraksha Trust

ಜ್ಯೋತಿ ಸಂಜೀವಿನಿ ಯೋಜನೆ

ಉದ್ದೇಶ: ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದ ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಉಚಿತವಾಗಿ ನೊಂದಾಯಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ತೃತೀಯ ಹಂತದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶವಾಗಿರುತ್ತದೆ..

ಸ್ಪೆಷಾಲಿಟಿಗಳು : ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಗಂಭೀರ ಸ್ವರೂಪದ ಅಪಘಾತ ಮತ್ತು ಚಿಕ್ಕ ಮಕ್ಕಳ ಕಾಯಿಲೆಗಳಿಗೆ ಸಂಬಂಧಿಸಿದ (ವೈದ್ಯಕೀಯ ಕಾನೂನು ಪ್ರಕರಣಗಳನ್ನು ಹೊರತುಪಡಿಸಿ) ಒಟ್ಟು 7 ಬಗೆಯ ಸ್ಪೆಷಾಲಿಟಿಗಳನ್ನು ಇದು ಒಳಗೊಂಡಿರುತ್ತದೆ.

ಫಲಾನುಭವಿಗಳು ಮತ್ತು ವ್ಯಾಪ್ತಿ: ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ರಾಜ್ಯ ಸರಕಾರದ ನೌಕರರಾಗಿರಬೇಕು ಹಾಗೂ ಅವರ ಸರಕಾರದ ಸೇವಾ ನಿಯಮಾವಳಿಗಳ ಅಡಿಯಲ್ಲಿ ಬರುವ ಕುಟುಂಬದ ಅವಲಂಬಿತ ಸದಸ್ಯರು ಯೋಜನೆಯ ವ್ಯಾಪ್ತಿಗೊಳಪಡುತ್ತಾರೆ.

ಫಲಾನುಭವಿಗಳ ಗುರುತಿಸುವಿಕೆ: ಕರ್ನಾಟಕ ಸರಕಾರದ ವಿಮಾ ಇಲಾಖೆಯ ಪಾಲಿಸಿ ಸಂಖ್ಯೆಯು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಹೆಚ್.ಆರ್.ಎಂ.ಎಸ್. ಡೇಟಾ ಬೇಸ್ ನೊಂದಿಗೆ ಸಮನ್ವಯಿತವಾಗಿರಬೇಕು. ಸರಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸರಕಾರದ ನೌಕರರ ಮತ್ತು ಅವರ ಅವಲಂಬಿತರನ್ನು ಗುರುತಿಸುವ ಅವಕಾಶ ನೀಡಿರುತ್ತದೆ. ನೌಕರನ ಅವಲಂಬಿತ ಕುಟಂಬ ಸದಸ್ಯನೆಂದರೆ, ನಿಯಮ 2(1) (i) (ii) ಹಾಗೂ (iii) ಕರ್ನಾಟಕ ಸರಕಾರದ ನೌಕರರು (ಮೆಡಿಕಲ್ ಅಟೆಂಡೆಂಟ್) ನಿಯಮಗಳು 1963 ಕೆಳಗೆ ವ್ಯಾಖ್ಯಾನಿಸಿರುವಂತೆ

1) ಸರಕಾರದ ನೌಕರರ ಹೆಂಡತಿ ಅಥವಾ ಗಂಡ

2) ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಸಾಮಾನ್ಯವಾಗಿ ಸರಕಾರದ ನೌಕರರ ಜೊತೆ ವಾಸವಿದ್ದು ಅವರ ಆದಾಯ ರೂ. 6000/- ಮೀರಿರಬಾರದು

3) ಸರಕಾರದ ನೌಕರನ ಮಕ್ಕಳು, ದತ್ತು ಮಕ್ಕಳು ಮತ್ತು ಮಲ ಮಕ್ಕಳಾಗಿದ್ದು, ಇವರು ಸಂಪೂರ್ಣವಾಗಿ ನೌಕರನಿಗೆ ಅವಲಂಬಿತವಾಗಿರಬೇಕು. ಮೇಲೆ ತಿಳಿಸಿರುವ ಎಲ್ಲಾ ವಿವರಗಳು ಸರಕಾರಿ ನೌಕರನಿಂದ ದೃಢೀಕರಿಸಲ್ಪಟ್ಟಿರಬೇಕು.

ಅನರ್ಹತೆ : ಯಾವುದೇ ನೌಕರನು ಬೇರೆ ಇನ್ನಾವುದೇ ಸರಕಾರಿ ಪ್ರಾಯೋಜಿತ ಯೋಜನೆಯ ಫಲಾನುಭವಿಯಾಗಿದ್ದಲ್ಲಿ ಯೋಜನೆಯ ಲಾಭ ಪಡೆಯಲು ಅನರ್ಹನಾಗಿರುತ್ತಾರೆ

.

ಯೋಜನೆಯ ವಿನ್ಯಾಸ : ಈ ಯೋಜನೆಯುಅಶ್ಯೂರೆನ್ಸ್ ವಿಧಾನದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯ ಸರಕಾರದ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೋಂದಾಯಿತ ಆಸ್ಪತ್ರೆಗಳಲ್ಲಿ ನಿಗಧಿತ ಹಣಕಾಸಿನ ಮಿತಿಯಿಲ್ಲದೆ ಚಿಕಿತ್ಸೆ ದೊರೆಯುತ್ತದೆ. ವಾಜಪೇಯಿ ಆರೋಗ್ಯಶ್ರೀ ಯೋಜನೆಯಲ್ಲಿ ಈಗಾಗಲೇ ನೋಂದಾಯಿತವಾದ ಆಸ್ಪತ್ರೆಗಳು ಜ್ಯೋತಿ ಸಂಜೀವಿನಿ ಯೋಜನೆಯಲ್ಲಿಯು ನೋಂದಾವಣೆಯಾಗುತ್ತವೆ. ನೋಂದಾವಣಿ ಪ್ರಕ್ರಿಯೆಯು ನಿರಂತರವಾಗಿರುತ್ತದೆ. ಇದೊಂದು ಉಚಿತ ಯೋಜನೆಯಾಗಿದ್ದು, ಇದರಲ್ಲಿ ನಿಗಧಿಪಡಿಸಿದ ವಾರ್ಡ್ ಸೌಲಭ್ಯಕ್ಕಿಂತ ಉನ್ನತ ದರ್ಜೆಯ ವಾರ್ಡ್ ಸೌಲಭ್ಯಗಳನ್ನು ಫಲಾನುಭವಿಯು ಆಯ್ಕೆ ಮಾಡಿಕೊಂಡಲ್ಲಿ ಇದರ ವ್ಯತ್ಯಾಸದ ಮೊತ್ತವನ್ನು ಫಲಾನುಭವಿಯೇ ಭರಿಸಬೇಕಾಗುತ್ತದೆ.

ಭೆನಿಫಿಟ್ ಪ್ಯಾಕೇಜು : ಯೋಜನೆಯು ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಗಂಭೀರ ಸ್ವರೂಪದ ಅಪಘಾತ ಮತ್ತು ಚಿಕ್ಕಮಕ್ಕಳ ಕಾಯಿಲೆಗಳಿಗೆ ಸಂಬಂಧಿಸಿದ 1068 ಬಗೆಯ ಶಸ್ತ್ರಚಿಕಿತ್ಸೆ/ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಸಮಾಲೋಚನೆ, ತಪಾಸಣೆ, ಚಿಕಿತ್ಸಾ ವೆಚ್ಚ, ಆಹಾರ, ಆಸ್ಪತ್ರೆಯ ವೆಚ್ಚ, ಔಷಧಗಳು ಮತ್ತು ನಂತರದ ಸೇವೆಗಳನ್ನು 10 ದಿನಗಳವರೆಗೆ ಒಳಗೊಂಡಿರುತ್ತದೆ. ಇಂಪ್ಲಾಂಟ್ಸ್, ಸ್ಟೆಂಟ್ ಗಳಿಗೆ ನಿಗಧಿಯಾಗಿರುವ ಗರಿಷ್ಠ ಮಿತಿಯನ್ನು ಮೀರಿದಲ್ಲಿ ವ್ಯತ್ಯಾಸದ ಮೊತ್ತವನ್ನು ಫಲಾನುಭವಿಯು ಭರಿಸಬೇಕಾಗುತ್ತದೆ. ಇದಲ್ಲದೆ 138 ಅನುಸರಣಾ ಚಿಕಿತ್ಸೆಗಳನ್ನು ಯೋಜನೆಯು ಒಳಗೊಂಡಿದ್ದು, ಸಮಾಲೋಚನೆ, ಡಯಾಗ್ನೋಸ್ಟಿಕ್ಸ್ ಮತ್ತು ಔಷಧಗಳನ್ನೊಳಗೊಂಡಿರುತ್ತದೆ.  

ವಾರ್ಡ್ ಗಳ ಅರ್ಹತೆ

ಕ್ರ. ಸಂ ವೇತನ ಶ್ರೇಣಿ ಪಡೆಯಲರ್ಹವಾದ ವಾರ್ಡ್ ದರ್ಜೆ/ ಸೌಲಭ್ಯಗಳು ದರಗಳು
1 ಮಾಸಿಕವಾಗಿ ರೂ. 16,000/- ರವರೆಗೆ ಸಾಮಾನ್ಯ ವಾರ್ಡ್ ದರಪಟ್ಟಿಯಂತೆ ಅನ್ವಯ *
2 ಮಾಸಿಕವಾಗಿ ರೂ. 16,001/-ರಿಂದ ರೂ.43,200/- ರವರೆಗೆ ಅರೆ ಖಾಸಗಿ ವಾರ್ಡ್ ಜನರಲ್ ವಾರ್ಡ್ ದರಕ್ಕಿಂತ 10% ಹೆಚ್ಚು

3

ರೂ. 43,201/- ಮತ್ತು ಮೇಲ್ಪಟ್ಟು ಖಾಸಗಿ ವಾರ್ಡ್ ಜನರಲ್ ವಾರ್ಡ್ ದರಕ್ಕಿಂತ 25% ಹೆಚ್ಚು