ಆರೋಗ್ಯ ಕರ್ನಾಟಕ ಬಗ್ಗೆ


ನಿಟ್ಟಿನಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು, .ಪಿ.ಎಲ್, ಬಿ.ಪಿ.ಎಲ್ ಜನರು ಹಾಗೂ ಅಪಘಾತದ ಸಂತ್ರಸ್ತರೂ ಸೇರಿಸಿದಂತೆ ರಾಜ್ಯದ ಬಹುಸಂಖ್ಯೆಯ ಜನರಿಗೆ ಹಲವಾರು ಆರೋಗ್ಯ ಯೋಜನೆಗಳನ್ನು ಆರೋಗ್ಯ ಭರವಸೆ ಮಾದರಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸುತ್ತಿದೆ. ವಿಶ್ವ ಬ್ಯಾಂಕ್ ಒಂದು ಅಧ್ಯಯನದ ಪ್ರಕಾರ ಯೋಜನೆಗಳ ಪರಿಣಾಮವಾಗಿ ಬಿಪಿಎಲ್ ಕುಟುಂಬಗಳಲ್ಲಿ ಶೇ.64 ರಷ್ಟು ಮರಣ ಪ್ರಮಾಣ ಕಡಿಮೆಯಾಗಿದೆ ಹಾಗೂ ಶೇ.64 ರಷ್ಟು ಸ್ವತಃ ಕೈಯಿಂದ ಮಾಡುವ ಖರ್ಚು ಇಳಿಕೆಯಾಗಿದೆ ಹಾಗೂ 12.3 ರಷ್ಟು  ಕುಟುಂಬಗಳು ವೈದ್ಯಕೀಯ ಸೇವೆಯನ್ನು ಪಡೆಯುವುದು ಕಂಡು ಬಂದಿದೆ ಹಿನ್ನೆಲೆಯಲ್ಲಿ ಸರ್ಕಾರವು ರಾಜ್ಯದ ಎಲ್ಲ ಜನತೆಗೆ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲ ಯೋಜನೆಗಳನ್ನು ಒಟ್ಟುಗೂಡಿಸಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಜಾರಿಗೊಳಿಸಲು ಚಿಂತನೆ ಮಾಡಿ ಇಂದು 'ಆರೋಗ್ಯ ಕರ್ನಾಟಕ' ಯೋಜನೆಯನ್ನು ಚಾಲನೆಗೊಳಿಸುತ್ತಿದೆ. ಮೂಲಕ ರಾಷ್ಟ್ರದಲ್ಲಿಯೇ ಸಾರ್ವತ್ರಿಕ ಆರೋಗ್ಯ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಆರೋಗ್ಯ ಕರ್ನಾಟಕ ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಜನತೆಗೆ ಪೂರ್ಣ ಪ್ರಮಾಣದ ಆರೋಗ್ಯವನ್ನು ಒದಗಿಸಿ ಜನತೆಯ ಸ್ವಾಸ್ಥ್ಯವನ್ನು ಸದೃಡಗೊಳಿಸುವ ಉದ್ದೇಶ ನೆರವೇರುತ್ತದೆ

ಯೋಜನೆಯ ಉದ್ದೇಶ:

ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ಎಲ್ಲ ಜನರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು 'ಆರೋಗ್ಯ ಕರ್ನಾಟಕ' ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಹೊಸ ಯೋಜನೆಯ ಅಡಿಯಲ್ಲಿ ಪ್ರಾಥಮಿಕ ಹಂತದ, ನಿಗಧಿತ ದ್ವಿತೀಯ, ಆರೋಗ್ಯ ರಕ್ಷಣೆ ಹಾಗೂ ನಿಗಧಿತ ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಅನುಷ್ಟಾನದಲ್ಲಿರುವ ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ಯಶಸ್ವಿನಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಹಾಗೂ ಹಿರಿಯ ನಾಗರೀಕರ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ, ಮುಖ್ಯಮಂತ್ರಿ ಸಾಂತ್ವಾನ ಹರೀಶ್ ಯೋಜನೆ ಹಾಗೂ ಇಂದಿರಾ ಸುರಕ್ಷಾ ಯೋಜನೆ ಮುಂತಾದ ವಿವಿಧ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ಒಂದೇ ಯೋಜನೆಯ ಅಡಿಯಲ್ಲಿ ಎಲ್ಲಾ ಜನರಿಗೂ ಆರೋಗ್ಯ ಸೇವೆಗಳನ್ನು ಒದಗಿಸುವುದು 'ಆರೋಗ್ಯ ಕರ್ನಾಟಕ' ಯೋಜನೆಯ ಉದ್ದೇಶವಾಗಿದೆ.

ಯೋಜನೆಯನ್ನು ಕರ್ನಾಟಕದಲ್ಲಿ ಹಂತ-ಹಂತವಾಗಿ ಜಾರಿಗೊಳಿಸಲಾಗುತ್ತದೆ. ಮೊದಲ ಹಂತದಲ್ಲಿ 10 ಪ್ರಮುಖ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳೆಂದರೆ ಕೆ.ಸಿ ಜನರಲ್ ಆಸ್ಪತ್ರೆ, ಜಯದೇವ ಹೃದ್ರೋಗ ಸಂಶೋದನಾ ಸಂಸ್ಥೆ, ಪಿ.ಎಂ.ಎಸ್.ಎಸ್.ವೈ ಆಸ್ಪತ್ರೆ, ವಿಕ್ಟೋರಿಯಾ ಕ್ಯಾಂಪಸ್, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ, ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಲಬುರ್ಗಿ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ

ಮುಂದಿನ ಹಂತಗಳಲ್ಲಿ ಇತರ 33 ಪ್ರಮುಖ ಆಸ್ಪತ್ರೆಗಳಲ್ಲಿ ಮತ್ತು 30-06-2018 ಜಿಲ್ಲಾ ಹಂತದ ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗುತ್ತದೆ.

ನಂತರದಲ್ಲಿ ಯೋಜನೆಯನ್ನು ತಾಲ್ಲೂಕು ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ರಮವಾಗಿ 30-9-2018, 31-10-2018 ಮತ್ತು 31-12-2018 ರಲ್ಲಿ ಜಾರಿಗೊಳಿಸಲಾಗುತ್ತದೆ.

ರೋಗಿಗಳ ನೊಂದಣಿ:

ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ರೋಗಿಯು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಒಂದು ಬಾರಿ ನೋಂದಣಿ ಮಾಡಬೇಕಾದ ಅವಶ್ಯಕತೆ ಇರುತ್ತದೆ. ರೋಗಿಯು ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದಾಗ ನೋಂದಣಿ ಸಿಬ್ಬಂದಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಆರೋಗ್ಯ ಕರ್ನಾಟಕ ಯೋಜನೆಗಾಗಿ ಅಭಿವೃದ್ಧಿ ಪಡಿಸಲಾದ ಪೋರ್ಟಲ್ನಲ್ಲಿ ನೋಂದಣಿ ಮಾಡಿ ARKID

ಹೆಸರಿನ ಗುರುತಿನ ಕಾರ್ಡನ್ನು ಜನರೇಟ್ ಮಾಡಲಾಗುತ್ತದೆ. ವ್ಯಕ್ತಿಯ ಆಧಾರ್ ಸಂಖ್ಯೆ ಆಧಾರದ ಮೇಲೆ ನೋಂದಣಿಯು ನಡೆಯುತ್ತದೆ. ರೊಗಿಗಳ ಬಯೋಮೆಟ್ರಿಕ್ ಪಡೆಯಲಾಗುತ್ತದೆ ಮತ್ತು CIDR ಆಧಾರ್ ಸರ್ವರ್ನಲ್ಲಿ ದೃಢೀಕರಿಸಲಾಗುತ್ತದೆ. E-KYC ವಿವರಗಳು ಸ್ವಯಂ ಭರ್ತಿಯಾಗುತ್ತವೆ. ಫಲಾನುಭವಿಯ ನೋಂದಣಿ ಮಾಡುವಾಗ ಬಯೋಮೆಟ್ರಿಕ್ ಗುರುತನ್ನು ರೀಡಿಂಗ್ ಮಾಡಲು ವಿಫಲವಾದಲ್ಲಿ ಮತ್ತೊಂದು ಆಯ್ಕೆ ಇರುತ್ತದೆ. QR ಕೋಡ್ ನಿಂದ OTP ವಿವರ ಸೆರೆಹಿಡಿಯಲಾಗುವುದು ಮತ್ತು ಆಹಾರ ಇಲಾಖೆಯಿಂದ ಒದಗಿಸಲಾದ ಡಾಟಾಬೇಸ್ನಲ್ಲಿ ವಿವರ ಪಡೆಯುವುದು.

ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಯೋಜನೆಯ ಪ್ರಯೋಜನಗಳನ್ನು ಪರ್ಯಾಯ ವಿಧಾನದಲ್ಲಿ ಪಡೆಯಬಹುದುಇದಕ್ಕೆ ಆಧಾರ್ ಕಾರ್ಡ್ ದೃಢೀಕರಣ ಕಡ್ಡಾಯವಾಗಿದ್ದು, ನೋಂದಣಿ ಮಾಡುವಾಗ ಫಲಾನುಭವಿಯಿಂದ ಪೂರ್ವ ಮುದ್ರಿತ ಸ್ವಯಂ ದೃಢೀಕರಣ ನಮೂನೆಯಲ್ಲಿ ಕಡ್ಡಾಯವಾಗಿ ಒಪ್ಪಿಗೆ ಪಡೆಯಲಾಗುತ್ತದೆಇದನ್ನು ನೊಂದಣಿ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತದೆ. ಸ್ವಯಂ ದೃಢೀಕರಣದ ಇನ್ನೊಂದು ಭಾಗದಲ್ಲಿ ಫಲಾನುಭವಿಯು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ  ನೋಂದಣಿ ಮಾಡುವಾಗ ಅವನು ಅಥವಾ ಅವಳು ಯಾವುದೇ ಇತರ ವಿಮಾ ಯೋಜನೆಗಳನ್ನು ಹೊಂದಿಲ್ಲವೆಂಬ ದೃಢೀಕರಣವನ್ನು ಒಳಗೊಂಡಿರುತ್ತದೆ.

ಯೋಜನೆಯಲ್ಲಿ ರೋಗಿಯ ಅರ್ಹತೆ

ರೋಗಿಯ ಅರ್ಹತೆಯನ್ನು ಪಡಿತರ ಚೀಟಿಯ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಡಾಟಾಬೇಸ್ ಪಡಿತರ ವಿವರಗಳ ಆಧಾರದಲ್ಲಿ ಫಲಾನುಭವಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013 ಅಡಿಯಲ್ಲಿ ಅರ್ಹತಾ ವರ್ಗಕ್ಕೆ ಸೇರುತ್ತಾರೆಯೋ ಅಥವಾ ಇಲ್ಲವೋ ಎಂದು ಗುರುತಿಸಲಾಗುತ್ತದೆ ರೀತಿ 'ಅರ್ಹತಾ ರೋಗಿ'ಯನ್ನು ವಿಂಗಡಿಸಲಾಗುತ್ತದೆ. ಒಂದೊಮ್ಮೆ ಫಲಾನುಭವಿಯು ಪಡಿತರ ಚೀಟಿ ಹೊಂದಿಲ್ಲದಿದ್ದರೆ ಅವನು ಅಥವಾ ಅವಳು ಸಹಜವಾಗಿ 'ಸಾಮಾನ್ಯ ರೋಗಿಎಂದು ನೋಂದಣಿ ಮಾಡಲಾಗುತ್ತದೆ

ಒಂದು ಬಾರಿ E-KYC ನಮೂನೆ ಭರ್ತಿ ಮಾಡಿದರೆ ಮತ್ತು ಫಲಾನುಭವಿಯನ್ನು ವರ್ಗಿಕರಣ ಮಾಡಿದರೆ ಫಲಾನುಭವಿಯನ್ನು ನೋಂದಣಿ ಮಾಡಲಾಗುತ್ತದೆಮತ್ತು ಯೋಜನೆಯ ಅನನ್ಯ ಗುರುತಿನ ARKID  ಸಂಖ್ಯೆಯನ್ನು  ನೀಡಲಾಗುತ್ತದೆ ಗುರುತಿನ ಸಂಖ್ಯೆಯನ್ನು ಒಂದು ಕಾರ್ಡ್ ನಲ್ಲಿ ಮುದ್ರಿಸಿ ಮೊದಲ ಬಾರಿಗೆ ರೂ.10/-ಗಳನ್ನು ಪಡೆದು ಒದಗಿಸಲಾಗುತ್ತದೆಒಂದೊಮ್ಮೆ ಕಾರ್ಡ್ ಕಳೆದುಕೊಂಡರೆ ಕೋರಿಕೆ ಮೇರೆಗೆ ರೂ.20/- ಪಡೆದು ಇನ್ನೊಂದು ಕಾರ್ಡ್ ಮರುಮುದ್ರಣ ಮಾಡಿ ನೀಡಲಾಗುತ್ತದೆ

ARKID

ಅನನ್ಯ ಗುರುತಿನ ARKID  ಸಂಖ್ಯೆಯು, ಪಡಿತರ ಚೀಟಿಯ ಸಂಖ್ಯೆಯ ವಿಭಜಕ (-)ವಾಗಿರುತ್ತದೆ  ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ನೋಂದಣಿಗಾಗಿ ಬರುವ ಕುಟುಂಬದ ಪ್ರತಿ ಸದಸ್ಯರಿಗೆ ಅನುಕ್ರಮವಾದ ಸಂಖ್ಯೆಯನ್ನು ಹೊಂದಿರುತ್ತದೆ.

ಆರೋಗ್ಯ ಕರ್ನಾಟಕ ಕಾರ್ಡ್ ನಲ್ಲಿ ಫಲಾನುಭವಿಯ ಫೋಟೋ, ಹೆಸರು, ಅನನ್ಯ ಯೋಜನೆ ಗುರುತು, ಮತ್ತು ಮೂಲ ವಿವರಗಳನ್ನು ಹೊಂದಿರುತ್ತದೆನೋಂದಣಿ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡರೆ ನೋಂದಣಿಗೊಂಡ ರೋಗಿಗೆ ಎಸ್.ಎಂ.ಎಸ್ ಅಲರ್ಟ್  ರವಾನೆಯಾಗುತ್ತದೆ.

ಒಮ್ಮೆ ಯೋಜನೆಯ ಕಾರ್ಡ್ ಜನರೇಟ್ ಆದಮೇಲೆ ರೋಗಿಯು ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದುಫಲಾನುಭವಿಗಳು ನಂತರದ ಆಸ್ಪತ್ರೆ ಭೇಟಿಗಳಿಗೆ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲಆರೋಗ್ಯ ಕರ್ನಾಟಕ ಕಾರ್ಡ್ ಆಧಾರದ ಮೇಲೆ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.  

ಅರ್ಹತಾ ರೋಗಿಗಳು: ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಹಾಗೂ 2013 ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಪ್ರಕಾರ ಅರ್ಹತಾ ಕುಟುಂಬಕ್ಕೆ ಸೇರಿರುವ ರೋಗಿಗಳು.

ಸಾಮಾನ್ಯ ರೋಗಿಗಳು: ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಹಾಗೂ 2013 ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಪ್ರಕಾರ ಅರ್ಹತಾ ಕುಟುಂಬ ಎಂಬ ವ್ಯಾಖ್ಯಾನ ಇಲ್ಲದಿರುವ ಅಥವಾ ಅರ್ಹತಾ ಕಾರ್ಡ್ ನ್ನು ಹಾಜರು ಪಡಿಸಲಾಗದ ರೋಗಿಗಳು.ಸಾಮಾನ್ಯ ರೋಗಿಗಳಿಗೆ ಸಹ-ಪಾವತಿ ಆಧಾರದ ಮೇಲೆ ಚಿಕಿತ್ಸೆ ಒದಗಿಸಲಾಗುತ್ತದೆ

ರೋಗಿಯು ಇನ್ನೊಂದು ಚಿಕಿತ್ಸೆಗಾಗಿ ಅದೇ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಅಥವಾ ಇತರ ಯಾವುದೇ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಅನುಸರಣಾ ಭೇಟಿ ಅಥವಾ ನಂತರದ ಬೇಟಿ ನೀಡಿದಾಗ ಹೊರರೋಗಿ ನೋಂದಣಿಗೆ  ಆರೋಗ್ಯ ಕರ್ನಾಟಕ ಕಾರ್ಡ್ ನ್ನು ಆಧಾರ್ ದೃಢೀಕರಣದ ಆಧಾರದಲ್ಲಿ ತೆಗೆದುಕೊಂಡು ಹೋಗಬೇಕು. ನಂತರದ ಭೇಟಿಗಳಲ್ಲಿ ಆರೋಗ್ಯ ಕರ್ನಾಟಕ ಕಾರ್ಡ್ ನ್ನು  ಹಾಜರು ಪಡಿಸಿದರೆ, ಆಧಾರ್ ಕಾರ್ಡ್ ಹಾಜರು ಪಡಿಸುವ ಅವಶ್ಯಕತೆ ಇರುವುದಿಲ್ಲ.

ಆರೋಗ್ಯ ಸೇವೆಗಳ ವಿವರ

ಪ್ರಾಥಮಿಕ ಆರೋಗ್ಯ ಸೇವೆಗಳು: ಎಲ್ಲ ಪ್ರಾಥಮಿಕ ಹಂತದ ಆರೋಗ್ಯ ಸೇವೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ನೀಡಲಾಗುವುದು. ಸೇವೆಗಳನ್ನು ರಾಜ್ಯದ ನಿವಾಸಿಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗುವುದು.  MCH ಸೇವೆಗಳಿಗೆ ಸಂಬಂಧಿಸಿಂತೆ ಪ್ಯಾರಾ ಮೆಡಿಕಲ್ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರುಗಳು ಮನೆಗಳಿಗೆ ಭೇಟಿ ನೀಡುವ ಮೂಲಕ ಸೇವೆಗಳನ್ನು ಬಲಪಡಿಸಲಾಗುವುದು.        

ದ್ವಿತೀಯ ಹಂತದ ಆರೋಗ್ಯ ಸೇವೆಗಳು: ಎಲ್ಲಾ ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ನೀಡಲಾಗುವುದು.                                                               

ಸಂಕೀರ್ಣ ದ್ವಿತೀಯ ಹಂತದ ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿನ ವೈದ್ಯಕೀಯ ಸಾಮಥ್ರ್ಯ, ಭೌತಿಕ ಸಾಮಥ್ರ್ಯದ ಆಧಾರದಲ್ಲಿ ಸಂಬಂಧಿಸಿದ ತಾಲ್ಲೂಕು ಅಥವ ಜಿಲ್ಲೆಗಳಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತದೆ.

ಒಂದೊಮ್ಮೆ ಸಂಬಂಧಿಸಿದ ಜಿಲ್ಲೆಯೋಳಗಿನ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ವೈದ್ಯಕೀಯ ಸಾಮರ್ಥ್ಯ ಅಥವಾ ಭೌತಿಕ ಸಾಮರ್ಥ್ಯ ಇಲ್ಲದಿದ್ದಲ್ಲಿ ಸಂಕೀರ್ಣ ದ್ವಿತೀಯ ಹಂತದ ಚಿಕಿತ್ಸೆಗಳಿಗೆ ರೋಗಿಗಳನ್ನು ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುವುದು.         ಆಸ್ಪತ್ರೆಗಳ ವೈದ್ಯಕೀಯ ಸಾಮರ್ಥ್ಯವನ್ನುwww.sast.gov.in/home  ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.   

ತೃತೀಯ ಹಂತದ ಆರೋಗ್ಯ ಸೇವೆಗಳು: ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ವೈದ್ಯಕೀಯ ಸಾಮರ್ಥ್ಯ, ಭೌತಿಕ ಸಾಮರ್ಥ್ಯ, ಆಧಾರದಲ್ಲಿ ನಿಗಧಿತ ತೃತೀಯ ಹಂತದ ಆರೋಗ್ಯ ಸೇವೆಗಳಿಗೆ ಜಿಲ್ಲೆಯೊಳಗಿರುವ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ನೀಡಲಾಗುವುದು           

ಒಂದೊಮ್ಮೆ ಜಿಲ್ಲೆಯಲ್ಲಿರುವ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ವೈದ್ಯಕೀಯ ಸಾಮರ್ಥ್ಯ, ಭೌತಿಕ ಸಾಮರ್ಥ್ಯ, ಇಲ್ಲದಿದ್ದಲ್ಲಿ ನಿಗಧಿತ ತೃತೀಯ ಹಂತದ ಚಿಕಿತ್ಸೆಗಳಿಗೆ ರೋಗಿಗಳನ್ನು ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುವುದು.

ಸರ್ಕಾರದಿಂದ ಬರಿಸಲಾಗುವ ಚಿಕಿತ್ಸಾ ವೆಚ್ಚ            

ಯೋಜನೆಯ ಅಡಿಯಲ್ಲಿ ನಿಗಧಿತ ದ್ವೀತೀಯ ಹಂತದ ಚಿಕಿತ್ಸೆಗಳಿಗೆ 5 ಸದಸ್ಯರ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ. 30000/-ಗಳು ಹಾಗೂ ನಿಗದಿತ ತೃತೀಯ ಹಂತದ ಚಿಕಿತ್ಸೆಗಳಿಗೆ ಅನುಮೋದಿತ ಪ್ಯಾಕೇಜ್ ಗಳು ಆಧಾರದ ಮೇಲೆ 5 ಜನರ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ. 150000/-ಗಳ ಚಿಕಿತ್ಸಾ ಸೌಲಭ್ಯವನ್ನು ಮಿತಿಗೊಳಿಸಲಾಗಿದೆ. ಒಂದೊಮ್ಮೆ ತುರ್ತು ಸ್ಥಿತಿಗಳಲ್ಲಿ ವಾರ್ಷಿಕ ಚಿಕಿತ್ಸಾ ವೆಚ್ಚದ ಮಿತಿ ಪೂರ್ಣಗೊಂಡಲ್ಲಿ ತೃತೀಯ ಹಂತದ ಚಿಕಿತ್ಸೆಗಳಿಗೆ ಹೆಚ್ಚುವರಿಯಾಗಿ ರೂ. 50000/- ಗಳನ್ನು ಒದಗಿಸಲಾಗುವುದು. ಯಶಸ್ವಿನಿ ಯೋಜನೆ ಅಡಿಯಲ್ಲಿ ಚಿಕಿತ್ಸಾ ವೆಚ್ಚದ ಸೌಲಭ್ಯವು ಕುಟುಂಬದ ಒಬ್ಬ ವ್ಯಕ್ತಿಗೆ ರೂ. 200000/- ಗಳಿದ್ದು, ಸದರಿ ಯೋಜನೆಯು ದಿನಾಂಕ:31-05-2018 ಕ್ಕೆ ಮುಕ್ತಾಯಗೊಳ್ಳಲಿದ್ದು, ಅಲ್ಲಿಯವರೆಗೆ ಸೌಲಭ್ಯವನ್ನು ಮುಂದುವರೆಸಲಾಗಿದೆ.                                

ಚಿಕಿತ್ಸಾ ವಿಧಾನಗಳು

ಅರ್ಹತಾ ರೋಗಿಗಳು ಸೂಚಿತ ಸಂಕೀರ್ಣ ದ್ವಿತೀಯ ಹಂತದ ಕಾಯಿಲೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರಲ್ ಪಡೆದು ನೊಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಪ್ಯಾಕೇಜ್ ದರಗಳ ಅನ್ವಯ ಚಿಕಿತ್ಸೆ ಪಡೆದಕೊಳ್ಳಬಹುದು ಚಿಕಿತ್ಸೆ ಅರ್ಹತಾ ರೋಗಿಗೆ ಉಚಿತವಾಗಿರುತ್ತದೆ ಮತ್ತು ಚಿಕಿತ್ಸೆಯ ವೆಚ್ಚವನ್ನು ಸರ್ಕಾರದಿಂದ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಮರುಪಾವತಿ ಮಾಡಲಾಗುತ್ತದೆ.                                                                                                    

ದ್ವಿತೀಯ ಹಂತದ ಆರೋಗ್ಯ ಸೇವೆಗಳು ಅಥವಾ ತೃತೀಯ ಹಂತದ ಆರೊಗ್ಯ ಸೇವೆಗಳನ್ನು ಸಾಮಾನ್ಯ ರೋಗಿಗಳಿಗೆ ಸಹ-ಪಾವತಿ ಆಧಾರದ ಮೇಲೆ ಚಿಕಿತ್ಸೆ ಒದಗಿಸಲಾಗುತ್ತದೆ. ಸಂಬಂಧಿಸಿದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳು ಸಾಮಾನ್ಯ ರೋಗಿಗಳಿಗೆ ನೀಡುವ ಚಿಕಿತ್ಸಾ ದರಗಳ ಮಾಹಿತಿಯನ್ನು ಪ್ರದರ್ಶಿಸಬೇಕಿರುತ್ತದೆ.

ಯೋಜನೆಯ ಅಡಿಯಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸಾ ವೆಚ್ಚದ ಮರುಪಾವತಿಯನ್ನು ಪ್ಯಾಕೇಜ್ ದರಗಳ ವೆಚ್ಚ ಅಥವ ಚಿಕಿತ್ಸೆಯ ನೈಜ ವೆಚ್ಚಗಳ ಪೈಕಿ ಯಾವುದು ಕಡಿಮೆ ಇರುತ್ತದೋ ಅದರ ಶೇ.30 ಕ್ಕೆ ಮಿತಿಗೊಳಿಸಲಾಗಿದೆ ಇನ್ನೂಳಿದ ಶೇ.70 ರಷ್ಟು ವೆಚ್ಚವನ್ನು ರೋಗಿಯಿಂದ ಪಡೆಯಬೇಕಾಗುತ್ತದೆ.                                 

ತುರ್ತುಸ್ಥಿತಿಯ ಸಂದರ್ಭದ (ನಿಗಧಿಗೊಳಿಸಿದ ತುರ್ತು ಚಿಕಿತ್ಸಾ ಕೋಡ್ಹೊರತಾಗಿ ಅರ್ಹತಾ ರೋಗಿಯಾಗಲಿ ಅಥವಾ ಸಾಮಾನ್ಯ ರೋಗಿಯಾಗಲಿ ಸರಕಾರಿ ಆಸ್ಪತ್ರೆಗಳಿಂದ ರೆಫರ್ ಆಗದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿ ಅಂತಹವರಿಗೆ ಸರ್ಕಾರವು ಯಾವುದೇ ವೆಚ್ಚವನ್ನು ಭರಿಸುವುದಿಲ್ಲ ಸದರಿ ರೋಗಿಗಳೆ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ.

ರೆಫರಲ್ ಸಿಸ್ಟಮ್        

ಸಂಕೀರ್ಣ ದ್ವಿತೀಯ ಹಂತದ ಚಿಕಿತ್ಸೆಗಳು ಅಥವಾ ತೃತೀಯ ಹಂತದ ಚಿಕಿತ್ಸೆಗಳಿಗೆ ಹತ್ತಿರದತಾಲ್ಲೂಕು ಆಸ್ಪತ್ರೆಯ ವೈದ್ಯರು ಅಥವಾ ಜಿಲ್ಲಾ ಆಸ್ಪತ್ರೆಯ ವೈದ್ಯರನ್ನು ಮೊದಲು ಸಂಪರ್ಕಿಸಬೇಕು. ರೋಗಿಗೆ ಅಗತ್ಯವಿರುವ ಚಿಕಿತ್ಸೆಗೆ ಸಂಬಂಧಿಸಿದಂತೆ ಸದರಿ ವೈದ್ಯರ ಸಮಾಲೋಚನೆಯ ಫಲಶೃತಿ ವೈದ್ಯಕೀಯ ಪರೀಕ್ಷೆಗಳ ವರದಿ, ಮತ್ತು ಸಾಮರ್ಥ್ಯ, ಅರ್ಹತೆ ಮುಂತಾದವುಗಳನ್ನು ಅವಲೋಕಿಸಿ ಚಿಕಿತ್ಸೆಯನ್ನು ಅದೇ ಸರಕಾರಿ ಆಸ್ಪತ್ರೆಯಲ್ಲಿ ಒದಗಿಸಬಹುದು. ಅಥವಾ ಅದೇ ಜಿಲ್ಲೆಯಲ್ಲಿರುವ ಅಥವಾ ನೆರೆ ಜಿಲ್ಲೆಯಲ್ಲಿರುವ ಮೇಲಿನ ಹಂತದ ಸರಕಾರಿ ಆಸ್ಪತ್ರೆಗೆ ರೆಫರ್ ಮಾಡಲಾಗುವುದು  

ಒಂದೊಮ್ಮೆ ಬೇಕಾಗಿರುವ ನಿರ್ದಿಷ್ಟ ಸಂಕೀರ್ಣ ದ್ವಿತೀಯ ಹಂತದ ಚಿಕಿತ್ಸೆಗಳಿಗೆ ಅಥವ ತೃತೀಯ ಹಂತದ ಚಿಕಿತ್ಸೆಗಳಿಗೆ ಚಿಕಿತ್ಸೆ ಒದಗಿಸುವ ವೈದ್ಯಕೀಯ ಸಾಮರ್ಥ್ಯ  ಅದೇ ಜಿಲ್ಲೆಯಲ್ಲಿರುವ  ಮೇಲಿನ ಹಂತದ ಆರೋಗ್ಯ ಸಂಸ್ಥೆಯಲ್ಲಿ ಲಭ್ಯವಿದ್ದಲ್ಲಿ ರೋಗಿಯನ್ನು ಚಿಕಿತ್ಸೆಗಾಗಿ ಅದೇ ಜಿಲ್ಲೆಯ ಮೇಲಿನ ಹಂತದ ಸಾರ್ವಜನಿಕ ಆಸ್ಪತ್ರೆಗೆ ರೆಫರ್ ಮಾಡಬೇಕುತುರ್ತು ಸಂದರ್ಭದಲ್ಲಿ ಮಾತ್ರ (ಸರಕಾರಿ ಆದೇಶದ ಅನುಬಂಧ 4 ರಲ್ಲಿ ಸೂಚಿಸಿರುವ ತುರ್ತು ಕೋಡ್ ಗಳು ) ಸಾರ್ವಜನಿಕ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಿಂದ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಬಹುದು.                             

ರೋಗಿಗಳನ್ನು ರೆಫರ್ ಮಾಡುವಾಗ ಸಾರ್ವಜನಿಕ ಆರೋಗ್ಯ ಸಂಸ್ಥೆಯು ಯಾವುದೇ ಒಂದು ನಿರ್ದಿಷ್ಟ ಆಸ್ಪತ್ರೆಗೆ ರೆಫರ್ ಮಾಡುವಂತಿಲ್ಲ. ಅಂದಿನ ದಿನಕ್ಕೆ ಆರೋಗ್ಯ ಕರ್ನಾಟಕ ಯೋಜನೆಗೆ ಸಿದ್ದಗೊಂಡಿರುವಎಲ್ಲಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಮುಕ್ತ ರೀತಿಯಲ್ಲಿ ರೆಫರ್ ಮಾಡಬೇಕು. ರೋಗಿಗೆ ಆಸ್ಪತ್ರೆಯನ್ನು ಆಯ್ದುಕೊಳ್ಳುವ ಅವಕಾಶವಿರುತ್ತದೆ. ರೋಗಿಯು ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡನ್ನು ಹಾಜರು ಪಡಿಸಿ ಆಸ್ಪತ್ರೆಯಿಂದ ಚಿಕಿತ್ಸೆಗೆ ಒಪ್ಪಿಗೆ ಪಡೆಯಬೇಕಾಗಿರುತ್ತದೆ.