Suvarna Arogya Suraksha Trust

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಎಂಬ ಸ್ವಾಯತ್ತ ಸಂಸ್ಥೆಯನ್ನು  1882ರ ಭಾರತೀಯ ಟ್ರಸ್ಟ್ ಕಾಯಿದೆ ಅಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯನ್ನು ಅನುಷ್ಟಾನಗೊಳಿಸಲು ಸರಕಾರಿ ಆದೇಶ ಸಂಖ್ಯೆ. ಹೆಚ್.ಎಫ್.ಡಬ್ಲ್ಯೂ/216/ಸಿಜಿಇ/2008, ಬೆಂಗಳೂರು ದಿನಾಂಕ: 20-02-2009 ರಂತೆ  ರಚಿಸಲಾಗಿದೆ.

ಸರಕಾರದ ನೂತನ ಯೋಜನೆಯ/ಉಪಕ್ರಮದ ತ್ವರಿತ ಅನುಷ್ಟಾನಕ್ಕಾಗಿ, ಸ್ವತಂತ್ರ ಹಾಗೂ ಸ್ವಾಯತ್ತ ಸಂಸ್ಥೆಯ ಮೂಲಕ ಆರ್ಥಿಕವಾಗಿ ಮತ್ತು ಪರಿಣಾಮಕಾರಿಯಾಗಿ ಯೋಜನೆಯ ಕಾರ್ಯಾಚರಣೆ ನಡೆಸಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.  ಈ ಹಿನ್ನೆಲೆಯಲ್ಲಿ 2009 ರಲ್ಲಿ ನೀತಿ ನಿರ್ಧಾರಗಳನ್ನು ಮಾಡಲು ಮತ್ತು  ಆರೋಗ್ಯ ಯೋಜನೆಗಳ ಅನುಷ್ಟಾನದ ಕುರಿತು ಮಾರ್ಗದರ್ಶನ ಮಾಡಲು ಈ ಕೆಳಕಂಡ ಮೂರು ಸಮಿತಿಗಳನ್ನು ಹೊಂದಿರುತ್ತದೆ.

1.    ಟ್ರಸ್ಟ್ ಮಂಡಳಿ - ನೀತಿ ನಿರ್ಧಾರಗಳಿಗಾಗಿ

2.    ಕಾರ್ಯಕಾರಿ ಸಮಿತಿ - ಯೋಜನೆಗಳ ಅನುಷ್ಟಾನಕ್ಕಾಗಿ

3.    ನೋಂದಣಿ ಮತ್ತು ಶಿಸ್ತು ಸಮಿತಿ - ಆಸ್ಪತ್ರೆಗಳ ನೋಂದಾವಣೆ  ಮತ್ತು ಶಿಸ್ತು ಕ್ರಮಗಳಿಗಾಗಿ

ನಾಗರೀಕ ಸನ್ನದು:

ಸರ್ವರಿಗೂ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ರೋಗ ತಡೆಯುವಿಕೆ, ರೋಗ ಪರಿಹರಿಸುವಿಕೆ ಮತ್ತು ಆರೋಗ್ಯ ಆರೈಕೆ ಮರುಸ್ಥಾಪಿಸುವಿಕೆಯ ಸಮಗ್ರ ಆರೋಗ್ಯ ಪಾಲನಾ ದೃಷ್ಟಿಕೋನದೊಂದಿಗೆ ರಾಜ್ಯದ ಎಲ್ಲಾ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸಾಧ್ಯವಾದಷು ್ಟ ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶಗಳನ್ನು ಹೊಂದಿದೆ.

 

You are here: Home ನಮ್ಮ ಬಗ್ಗೆ